ಕ್ರಾಂತಿ ವಾಣಿ ವಾರ್ತೆ
ವರದಿ : ಸಿಕಂದರ ಎಂ.ಆರಿ
ಗದಗ : ಕಾನೂನು ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲೆ ಸಮಾಜದಲ್ಲಿ ನಡೆಯುತ್ತಿರು ಅನ್ಯಾಯದ ವಿರುದ್ಧ ಧ್ವನಿಯಾಗುವ ಮೂಲಕ ಸಾಮಾನ್ಯ ಜನರಿಗೆ ಕಾನೂನು ಜ್ಞಾನ ನೀಡಲು ಮುಂದಾಗಬೇಕಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದರು.
ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಮಾನವ ಹಕ್ಕುಗಳ ಕುರಿತು ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಪ್ರಸುತ್ತ ದಿನಮಾನಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತೇವೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕಾನೂನು ಪದವಿದರರು ಹಾಗೂ ಕಾನೂನು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳಲ್ಲಿ ನೊಂದ ವ್ಯಕ್ತಗಳಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ತಾವು ಕೂಡ ಆನ್ ಲೈನ್ ಮೂಲಕ ಅಥವಾ ಲಿಖಿತ ದೂರಿನ ಮೂಲಕ ಪ್ರಕರಣಗಳನ್ನು ನೀಡಬಹುದು. ಇದರಿಂದ ತಾವು ಮಾಡುವ ವೃತ್ತಿ ಗೌರವ, ಘನತೆ ಹೆಚ್ಚಾಗುವುದರ ಜತೆಗೆ ಸಮಾಜದಲ್ಲಿ ಉತ್ತಮ ವಕೀಲರಾಗಲು ಸಹಾಯವಾಗುತ್ತದೆ ಎಂದರು.
ವಕೀಲರು ಸಮಾಜದ ಕಣ್ಣುಗಳು ಆಗಿದ್ದಾರೆ. ಅನ್ಯಾಯವಾಗಿದೆ ಎಂದು ನೊಂದ ವ್ಯಕ್ತಿಗಳು ನಿಮ್ಮ ಹತ್ತಿರ ಬರುತ್ತಾರೆ ಅಂದರೆ ಅವರಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಲು ಮತ್ತು ಕಾನೂನು ಅರಿವುವನ್ನು ಮೂಡಿಸುವುದು ಬಹಳ ಅಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ, ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಎ ದಿನೇಶ ಸಂಪತ್ ರಾಜ್, ನಿವೃತ್ತ ನ್ಯಾಯಾಧೀಶ ಜಿ.ಎಸ್. ಪಲ್ಲೇದ,
ಉಪನ್ಯಾಸಕರಾದ ಡಾ. ವಿಜಯ ಮುರದಂಡೆ, ಡಾ.ಶ್ರೀನಿವಾಸ ಪಾಲ್ಕೊಂಡ, ಡಾ. ಜ್ಯೋತಿ ಸಿ.ವಿ, ಶರತ್ ದರಬಾರೆ, ಎಸ್.ಟಿ. ಮೂರಶಿಳ್ಳಿನ, ಡಾ. ಸಿ.ಬಿ. ರಣಗಟ್ಟಿಮಠ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.