ಕ್ರಾಂತಿ ವಾಣಿ ವಾರ್ತೆ
ಯಲಬುರ್ಗಾ : ಯಲಬುರ್ಗಾ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಹೊಸ ಅಂಗನವಾಡಿ ಕಟ್ಟಡ ಮಾಡುವುದಕ್ಕೆ ಸರ್ಕಾರ ಅನುದಾನ ನೀಡಿದೆ ಗ್ರಾಮಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿ ನೀಡಿ ಸಹಕಾರ ಮಾಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಹೇಳಿದರು
ತಾಲೂಕಿನ ತಲ್ಲೂರು, ಗೆದಗೇರಿ ಯಲಬುರ್ಗಾ ಪಟ್ಟಣದ ವಿವಿಧ ಕಾಲೋನಿಯ ಅಂಗನವಾಡಿ ಕಟ್ಟಬೇಕಾದ ಸ್ಥಳಗಳಿಗೆ ಭೇಟಿ ನೀಡಿ. ಮಾತನಾಡಿದ ಅವರು ತಾಲೂಕಿನ ವಿವಿಧ ಸರಕಾರಿ ಶಾಲೆಯಲ್ಲಿ ಸಾಕಷ್ಟು ಬಿಲ್ಡಿಂಗ್ ಕಟ್ಟುವುದಕ್ಕೆ ಜಾಗ ಇದ್ದು ಗ್ರಾಮಸ್ಥರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿ ಹೇಳಿ ನಿಮ್ಮ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಮಾಡುವುದಕ್ಕೆ ಸಹಕಾರ ನೀಡಬೇಕು. ದೇವಸ್ಥಾನ ಕಟ್ಟಬೇಕಾದರೆ ಗ್ರಾಮಸ್ಥರು ಮನೆ ಮನೆಗೆ ಹೋಗಿ ಪಟ್ಟಿ ರೂಪದಲ್ಲಿ ದೇವಸ್ಥಾನ ನಿರ್ಮಾಣ ಮಾಡಿಕೊಳ್ಳುತ್ತೀರಿ ಮಕ್ಕಳ ಶಿಕ್ಷಣಕ್ಕಾಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಟ್ಟುವುದಕ್ಕೆ ಅನುದಾನ ಬಂದಿದೆ ಜಾಗದ ಸಮಸ್ಯೆಯಿಂದ ಸುಮಾರು ವರ್ಷದಿಂದ ಕಟ್ಟಡ ಕಾಮಗಾರಿ ಮಾಡೋದಕ್ಕೆ ಆಗುತ್ತಿಲ್ಲ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅಂಗನವಾಡಿ ಕಟ್ಟಬೇಕಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಗ್ರಾಮ ಪಂಚಾಯಿತಿ. ಅಭಿವೃದ್ಧಿ ಅಧಿಕಾರಿಗಳ ಜೊತೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿ ಮಾದೇವಪ್ಪ ಪತ್ತಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.