ಕ್ರಾಂತಿವಾಣಿ ವಾರ್ತೆ
ಸುರಪುರ: ಅಂಧರಾಗಿದ್ದರೂ ಸಂಗೀತದ ಮೂಲಕ ಭಕ್ತ ಶಿಷ್ಯಗಣವನ್ನು ಸೃಷ್ಠಿಸಿದವರು. ಸಮಾಜದಲ್ಲಿ ಶಿಕ್ಷಣ, ಶಾಂತಿ ನೆಲೆಸಲು ಅವಿರತವಾಗಿ ಶ್ರಮಿಸಿದವರು ಗವಾಯಿಗಳು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಹಾಪುರದ ಏಕದಂಡಿ ಮಠದ ವಿರೂಪಾಕ್ಷ ಸ್ವಾಮಿಗಳು ಹೇಳಿದರು.
ತಾಲೂಕಿನ ದೇವರಗೋನಾಲದಲ್ಲಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಸಪ್ತಸ್ವರ ಸಂಸ್ಥೆ ವತಿಯಿಂದ ಪಂ. ಪಂಚಾಕ್ಷರ ಗವಾಯಿ ಹಾಗೂ ಡಾ. ಪಂ. ಪುಟ್ಟರಾಜಕವಿ ಗವಾಯಿ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ನಾದ ಸುನಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ಆಧ್ಯಾತ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸತತ ಪ್ರಯತ್ನದಿಂದ ಶಿವಯೋಗಿಗಳಾದವರು ಪಂಡಿತ ಪಂಚಾಕ್ಷರ ಗವಾಯಿ ಹಾಗೂ ಡಾ. ಪಂಡಿತ್ ಪುಟ್ಟರಾಜ್ ಕವಿ ಗವಾಯಿ ಅವರು ಕಣ ್ಣದ್ದವರಿಗೆ ಅಷ್ಟೇ ಕಣ್ಣಾಗಲಿಲ್ಲ ಕಣ ್ಣದ್ದವರಿಗೂ ಕಣ್ಣಾಗಿ ನಾಡಿನೊಳಗೆ ಮೆರೆದು ಹೋದ ಮಹಾತ್ಮರು ಎಂದರು.
ಮೌನೇಶ್ವರ ದೇವಸ್ಥಾನದ ಅರ್ಚಕ ಶ್ರೀಲಿಂಗಯ್ಯ ತಾತನವರು ಮಾತನಾಡಿ, ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಸಾಂಸ್ಕೃತಿಕ ಅಧಿಪತಿಗಳಾಗಿ, ಸಂಗೀತ ಸಾಮ್ರಾಟರಾಗಿ ಗವಾಯಿಗಳು ಬೆಳಗಿದ್ದಾರೆ. ಅವರ ನಡೆ, ನುಡಿಯಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಚೆನ್ನಪ್ಪ ಐಕೂರ್ ಹಾಗೂ ಸೋಮಶೇಖರ್ ಮುದುನೂರ ಅವರಿಗೆ ಪಂಚಾಕ್ಷರಿ ಪುಟ್ಟರಾಜ ಪ್ರಶಸ್ತಿ ಪ್ರದಾನಿಸಲಾಯಿತು.
ಕಲಾವಿದರಾದ ಮಲ್ಲಿಕಾರ್ಜುನ್ ಚಾಮನಾಳ, ರಮೇಶ್ ಯಾಳಗಿ, ಸೋಮಶೇಖರ ಮುದನೂರು, ರಮೇಶ್ ಆಚಾರ್ಯ, ಚೆನ್ನಪ್ಪ ವಿಶ್ವಕರ್ಮ, ನಿಂಗಣ್ಣ ವಿಶ್ವಕರ್ಮ, ಚೆನ್ನಪ್ಪ ಐಕೂರು, ಮನೋಹರ ಆಚಾರ್ಯ, ಲಕ್ಷ್ಮೀಕಾಂತ ಕುಕನೂರು, ಬಸವರಾಜ್ ಯಳಸಂಗಿ, ರವಿ ವಿಭೂತಿ, ಸಿದ್ದು ಮೋರಟಗಿ, ಜಗದೀಶ್ ಮಾನು, ಜಿಲಾನಿ ಉರಸುಂಡಿಗಿ, ಡಾ. ಸಂತೋಷ್ ಶಾರದಹಳ್ಳಿ, ಸಭಾ, ಗುರುಕುಮಾರ ಹೂಗಾರ್, ಹಾಗೂ ದೇವರಗೋನಾಲದ ಗ್ರಾಮಸ್ಥರು ಇದ್ದರು.
ಸುರಪುರ: ತಾಲೂಕಿನ ದೇವರಗೋನಾಲದಲ್ಲಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಗವಾಯಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ನಾದ ಸುನಾದ ಕಾರ್ಯಕ್ರಮ ನಡೆಯಿತು.