ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ:
ನಗರದ ಹೃದಯ ಭಾಗದಲ್ಲಿರುವ ಮುಖ್ಯ ಅಂಚೆಕಚೇರಿ ಕಾಂಪೌಂಡ್ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಅಕ್ರಮವಾಗಿ ಗೂಡಂಗಡಿಗಳು ನಿರ್ಮಾಣದ ಹಾವಳಿ ಹೆಚ್ಚಾಗಿದ್ದು, ಗಲಾಟೆ, ಗದ್ದಲ, ವಾಹನಗಳ ಶಬ್ದದಿಂದ ಅಂಚೆ ಸಿಬ್ಬಂದಿಗಳು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿರುವ ಅಂಚೆ ಕಚೇರಿ ಸುತ್ತಮುತ್ತ ವ್ಯಾಪಾರಿಗಳು ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಗೂಡಂಗಡಿಗಳು ತಲೆ ಎತ್ತಿನಿಂತಿವೆ. ಅಂಚೆ ಕಚೇರಿಯ ಎದುರುಗಡೆ ಮತ್ತು ಬಲ ಭಾಗದಲ್ಲೇ ಗೂಡಂಗಡಿಗಳು ನಿರ್ಮಾಣವಾಗಿವೆ. ಕಳೆದು ಏಳೆಂಟು ವರ್ಷಕ್ಕಿಂತ ಹಿಂದೆ ಯಾವುದೇ ಗೂಡಂಗಡಿಗಳು ಇದ್ದಿರಲಿಲ್ಲ. ನಗರ ಬೆಳೆದಂತೆ ಒಂದಿಂಚು ಜಾಗ ಬಿಡದಂತೆ ಅಕ್ರಮವಾಗಿ ಗೂಡಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿದೆ.
- ಕಿರಿಕಿರಿ: ಅಂಚೆ ಕಚೇರಿಗೆ ಬರಬೇಕೆಂದರೆ ಆಟೋಗಳು, ಬೈಕ್‌ಗಳು, ಜನರನ್ನು ದಾಟುವ ಕಿರಿಕಿರಿ ಅನುಭವಿಸಬೇಕಿದೆ. ಮಕ್ಕಳು, ವೃದ್ಧರು, ಆಶಕ್ತರು ಬರುವುದು ತುಸು ಕಷ್ಟವಿದೆ. ಇದರಿಂದ ಹಲವು ಅಂಚೆಕಚೇರಿ ಪೋಷ್ಟರ್ ವಾಹನಗಳನ್ನು ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಲ್ಲವೇ? ನಾವು ಒಳಗಡೆ ಹೇಗೆ ಬಂದು ಹೋಗಬೇಕು? ಎಂದು ಗ್ರಾಹಕರು ಸಿಬ್ಬಂದಿಗಳ ಜತೆ ವಾಗ್ವಾದಗಳು ನಿತ್ಯ ನಡೆಯುತ್ತಲೇ ಇವೆ.
ನಿಲ್ಲುವ ಆಟೋಗಳು: ದರಬಾರ ರಸ್ತೆ ಮಾರ್ಗವಾಗಿ ಹೋಗುವ ಆಟೋಗಳು ಅಂಚೆಕಚೇರಿ ಬಾಗಿಲಿಗೆ ಬಂದು ನಿಲ್ಲುತ್ತವೆ. ಸಿಬ್ಬಂದಿಗಳು ಎಷ್ಟೇ ಹೇಳಿದರೂ ಉದ್ಧಟತನ ಮೆರೆಯುತ್ತಿದಾರೆ. ಇದರಿಂದ ಗ್ರಾಹಕರು, ಸಿಬ್ಬಂದಿಗಳು ಬೇಸತ್ತು ಹೋಗಿದ್ದಾರೆ. ಇದನ್ನು ನೋಡುವ ಖಾಕಿಯವರೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಗೂಡಂಗಡಿಗಳು: ಅಂಚೆಕಚೇರಿ ಸುತ್ತಮುತ್ತ ಸುಮಾರು ೧೫ಕ್ಕೂ ಹೆಚ್ಚು ಗೂಡಗಂಡಿಗಳಿವೆ. ಎದುರುಗಡೆ ಏಳೆಂಟು ಅಂಗಡಿ, ಬಲಭಾಗದಲ್ಲಿ ಏಳೆಂಟು ಅಂಗಡಿಗಳಿವೆ. ತಳ್ಳು ಗಾಡಿಯಲ್ಲಿ ಹೋಟೆಲ್, ಪೋಟೋ ಮಾರಾಟ, ತೆಂಗಿನ ಎಳೆನೀರು, ಪಾನ್‌ಶಾಪ್, ಇಸ್ತ್ರೀ, ಮಡಿಕೆ ವ್ಯಾಪಾರ, ಹಣ ್ಣನ ವ್ಯಾಪಾರದ ಅಂಗಡಿಗಳಿವೆ. ಇವುಗಳಿಂದ ಕಾಗದ, ಕಸ-ಕಡ್ಡಿ, ಎಲ್ಲಂದರಲ್ಲಿ ನೀರು ಚಲ್ಲಿ ಹೊಲುಸ ಮಾಡುತ್ತಿದ್ದಾರೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಸಿಬ್ಬಂದಿಗಳ ರೋಗಕ್ಕೆ ಕಾರಣವಾಗುತ್ತಿದೆ. ಇದನ್ನೆಲ್ಲ ತಪ್ಪಿಸಲು ಅಂಚೆ ಕಚೇರಿಯಿಂದ ವ್ಯಾಪರಾರಿಗಳಿಗೆ ನೋಟಿಸ್ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ.
ಮನವಿಗಿಲ್ಲ ಬೆಲೆ: ಗೂಡಂಗಡಿಗಳಿಂದ ಆಗುತ್ತಿರುವ ತೊಂದರೆಗಳ ಸ್ವವಿವರವಾದ ಮಾಹಿತಿ ಒಳಗಂಡ ಮನವಿಯನ್ನು ಗ್ರಾಹಕರು, ಅಂಚೆಕಚೇರಿ ಸಿಬ್ಬಂದಿ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳಿಗೆ ನೀಡಿ ೪೦ ದಿನವಾದರೂ ಕ್ರಮ ಕೈಗೊಂಡಿಲ್ಲ. ಇದರಿಂದ ರಾಜ್ಯದಲ್ಲಿ ಕೇಂದ್ರ ಸರಕಾರದ ಕಚೇರಿಗಳ ನೀಡುವ ಮನವಿಗೆ ಬೆಲೆ ಇಲ್ಲದಂತಾಗಿದೆ.
ಪ್ರಭಾವ: ಕಚೇರಿ ಮುಂದೆ, ಪಕ್ಕದಲ್ಲಿ ಗೂಡಂಗಡಿಗಳನ್ನು ಹಾಕದಂತೆ ವ್ಯಾಪಾರಿಗಳಿಗೆ ಹೇಳಿದರೆ ರಾಜಕೀಯ ಮುಖಂಡರಿಂದ ಪೋನ್ ಮಾಡಿಸಿ ಪ್ರಭಾವ ಬೀರುತ್ತಾರೆ. ಎಲ್ಲರ ಸಹಕಾರದಿಂದ ಕೆಲಸ ಮಾಡಬೇಕಿದೆ. ನೌಕರರಿಗೆ ಮತ್ತು ಸರಕಾರಿ ಆಸ್ತಿಪಾಸಿ ತೊಂದರೆ ಉಂಟಾದರೆ ನಾವು ಯಾರಿಗೆ ಹೇಳುಬೇಕೆಂಬುದು ಅಂಚೆಕಚೇರಿ ಸಿಬ್ಬಂದಿಗಳ ಮಾತಾಗಿದೆ.
ಗಲೀಜಿನ ವಾತಾವರಣ: ಕಚೇರಿ ಸುತ್ತಮುತ್ತ ಗೂಡಂಗಡಿ ಮುತ್ತು ಹೋಟೆಲ್, ಚಹಾ ಬಂಡಿಗಳು, ಎಳೆನೀರು, ಪಾನಿಪೂರಿ, ಐಸ್‌ಕ್ರೀಮ್ ಅಂಗಡಿಗಳಿAದ ಗಲೀಜಿನ ವಾತಾವರಣ ನಿರ್ಮಾಣವಾಗಿದೆ. ಸ್ವಚ್ಛತೆ ಬಗ್ಗೆ ಕಚೇರಿ ಸಿಬ್ಬಂದಿಗಳು ತಿಳಿಸಿದರೂ ಕ್ಯಾರೆ ಎನ್ನುವುದಿಲ್ಲ. ಅಂಚೆ ಕಚೇರಿ ಮುಂದೆ ಬೈಕ್‌ಗಳು ನಿಲ್ಲುತ್ತವೆ. ಆಟೋಗಳು ನಿಲ್ಲುತ್ತವೆ. ಇದರಿಂದ ಅಂಚೆ ಗ್ರಾಹಕರು, ಏಜೆಂಟರ್‌ಗಳು ಕಚೇರಿ ಒಳಗಡೆ ಬರಲು ಹರಸಾಹಸ ಮಾಡಬೇಕಿದೆ. ಇದಕ್ಕೆಲ್ಲ ಪರಿಹಾರ ದೊರೆಯುವುದೇ ಕಾಯ್ದು ನೋಡಬೇಕಿದೆ.ಪೋಸ್ಟ್ ಆಫೀಸ್ ಮುಂದೆ ಹಾಗೂ ಸುತ್ತಮುತ್ತಲೂ ಸಣ್ಣಪುಟ್ಟ ವ್ಯಾಪಾರಿಗಳಿಂದ ಇನ್ನಿಲ್ಲದಂತೆ ತೊಂದರೆ ಎದುರಿಸುವಂತಾಗಿದೆ. ಆಫೀಸ್ ಕಾಂಪೌಂಡ್ ಗೋಡೆಯನ್ನೇ ಒತ್ತುವರಿ ಮಾಡಿಕೊಂಡು ಫುಟ್‌ಪಾತ್ ಮೆಲೆ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ತಾತ್ಕಲಿಕ ಪರಿಹಾರದ ನಮಗೆ ಬೇಡ. ಶಾಶ್ವತ ಪರಿಹಾರ ಬೇಕಿದೆ. ಇಲ್ಲದಿದ್ದರೆ ಇಲ್ಲದಿದ್ದರೆ ಅಂಚೆ ಕೇಂದ್ರ ಕಚೇರಿಗೆ ಪತ್ರ ಬರೆಯುತ್ತೇವೆ.
••••• ಶ್ರೀದೇವಿ ಎನ್. ಭಜಂತ್ರಿ, ಪೋಸ್ಟ್ ಮಾಸ್ಟರ್, ಸುರಪುರ.
—
ಅಂಚೆ ಕಚೇರಿಯವರು ಸುತ್ತಮುತ್ತಲಿನ ಜಾಗವನ್ನು ಅತಿಕ್ರಮಿಸಿಕೊಂಡು ಶೆಡ್ ಮತ್ತು ಗೂಡಂಗಡಿಗಳನ್ನು ನಿರ್ಮಿಸಿಕೊಂಡಿರುವ ಕುರಿತು ಮನವಿ ನೀಡಿದ್ದಾರೆ. ಶೀಘ್ರವೇ ಪೊಲೀಸ್ ಇಲಾಖೆ ಮತ್ತು ನಗರಸಭೆ ಜಂಟಿಯಾಗಿ ತೆರವು ಕಾರ್ಯವನ್ನು ಮಾಡುತ್ತೇವೆ.
••••• ಆನಂದ ವಾಘ್ಮೋಡೆ, ಪಿಐ, ಸುರಪುರ.
———
ಚುನಾವಣೆ ನಿಮಿತ್ತ ಬೇರೆಡೆ ವರ್ಗಾವಣೆಯಾಗಿತ್ತು. ಮನವಿ ನೀಡಿರುವುದು ನನ್ನ ಗಮನಕ್ಕಿಲ್ಲ. ಮನವಿ ಪರಿಶೀಲಿಸಲಾಗುವುದು. ಏಕಾಏಕಿ ತೆರವುಗೊಳಿಸುವುದು ಸೂಕ್ತವಲ್ಲ. ಆದ್ದರಿಂದ ಮಾನವೀಯತೆ ಆಧಾರದ ಮೇಲೆ ಗೂಡಂಗಡಿಗಳ ವ್ಯಾಪಾರಿಗಳಿಗೆ ಒಂದು ವಾರದ ಗಡುವು ನೀಡಿ ತೆರವುಗೊಳಿಸಲು ತೀರ್ಮಾನಿಸಲಾಗುತ್ತದೆ.
••••••• ಜೀವನ್ ಕಟ್ಟಿಮನಿ, ಪೌರಾಯುಕ್ತ, ಸುರಪುರ.
¶¶¶¶
ಸುರಪುರ: ನಗರದ ಅಂಚೆ ಕಚೇರಿ ಮುಂದೆ ಹೋಟೆಲ್, ಆಟೋ ನಿಂತಿರುವುದು.
¶¶¶¶
ಸುರಪುರ: ನಗರದ ಅಂಚೆ ಕಚೇರಿ ಮುಂದೆ ಅಕ್ರಮವಾಗಿ ತೆಲೆ ಎತ್ತಿರುವ ಶೆಡ್ ಗಳಿ
¶¶¶¶¶
ಸುರಪುರ: ನಗರದ ಅಂಚೆ ಕಚೇರಿ ಮುಂದೆ ಎಳೆನೀರು ಅಂಗಡಿ.