ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ನಗರದ ರಂಗಂಪೇಟೆಯ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಂದಿರದಲ್ಲಿ ಭಾನುವಾರ ದಂದು ಗುರು ಪೂರ್ಣಿಮಾ ನಿಮಿತ್ಯ ಪ್ರವಚನ ಕಾರ್ಯಕ್ರಮ, ಸಂಗೀತೋತ್ಸವ ನಡೆಯಲಿದೆ.
ಶ್ರೀ ಅಜೇಂದ್ರ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನ ನೀಡುವರು. ವಿಶ್ವಕರ್ಮ ಏಕದಂಡಗಿಮಠ ಶಹಾಪುರ ನಿವೃತ್ತ ಉಪನ್ಯಾಸಕರು..ಅಧ್ಯಕ್ಷತೆ ವಹಿಸುವರು.
ಶ್ರೀ ಹೊನ್ನಪ್ಪ ಹಳಿಜೋಳದ ಸ.ಸ.ಟ್ರಸ್ಟ್ ಸಮೀತಿ ರಂಗಂಪೇಟ ವತಿಯಿಂದ ತಿಮ್ಮಾಪುರ ಮತ್ತು ರಂಗಂಪೇಟೆಯ ಸದ್ದಕ್ತಾದಿಗಳಿಗಾಗಿ ಶ್ರೀ ಮನೃಪ ಶಾಲಿವಾಹನ ಶಕೆ 1946 ಕ್ರೋಧಿನಾಮ ಸಂವತ್ಸರ ಆಷಾಢ ಮಾಸ ಅಂಗವಾಗಿ ಭಾನುವಾರ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಸ್ವಾಮಿ ಮಂದಿರದಲ್ಲಿ ಸಂಜೆ 6 ಗಂಟೆಗೆ ಗುರು ಪೂರ್ಣಿಮ ನಿಮಿತ್ಯ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಂಡು ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ. ಸದ್ಭಕ್ತರಿಗೂ ಪ್ರಸಾದ ವ್ಯವಸ್ಥೆ ಇರುತ್ತದೆ..