ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಎಪಿಎಂಸಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಒಂದು ನೋಡು ಮರಳಿಗೆ 25 ರಿಂದ 30 35,000 ರೂ.ಗೆ ಮರಳು ಮಾಫಿಯಾದಾರರು ಮಾರಾಟ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ದಲಿತ ಮುಖಂಡರು, ಅನತಿದೂರದಲ್ಲಿರುವ ಕೃಷ್ಣಾ ನದಿಯಿಂದಲೇ ಮರಳು ತಂದರೂ ಸುರುಪುರ ತಾಲೂಕಿನಲ್ಲಿರುವ ಜನತೆಗೆ ಬೆಂಗಳೂರು ನಗರದಲ್ಲಿ ಇರುವಷ್ಟು ಬೆಲೆಗೆ ನಾವು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ನಮ್ಮದೇ ಮರುಳನ್ನು ನಾವು ಅತಿ ಹೆಚ್ಚು ಬೆಲೆಗೆ ಕೊಂಡುಕೊಳ್ಳುವಂತೆ ಮರಳುಮಾಫಿಯಾ ಮಾರಾಟಗಾರರು ಚಕ್ರವ್ಯೂಹ ರಚಿಸಿದ್ದಾರೆ. ಇದಕ್ಕೆ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಶ್ಯಾಮಿಲಾಗಿ ಮರಳು ಮಾಫಿಯಾದವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಪೂರ್ವದಲ್ಲಿ ಬಂದಾಗಿದ್ದ ಉಸುಗು ಇತ್ತೀಚಿಗೆ ಪ್ರಾರಂಭವಾಗಿದ್ದು, ಒಂದು ಲೋಡ್ ಮರಳಿಗೆಗೆ 25 ಸಾವಿರದಿಂದ 35 ಸಾವಿರದವರೆಗೆ ತಾಲೂಕಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಮನೆ ಕಟ್ಟುವವರಿಗೆ ಅನಾನುಕೂಲವಾಗಿದೆ. ಕೆಲವೊಂದು ಮರಳಿನ ದಲ್ಲಾಗಳು ಸರಕಾರದ ಜಾಗವಾದ ಕೆಂಭಾವಿ ಪಟ್ಟಣದ ಎಪಿಎಂಸಿಯಲ್ಲಿ ಅನಧಿಕೃತವಾಗಿ ನೂರಾರು ಲೋಡ್ ಉಸುಗು ದಾಸ್ಥಾನು ಮಾಡುತ್ತಿದ್ದಾರೆ ಎಂದು ದೂರಿದರು.
ಸದ್ಯ ಪ್ರಾರಂಭವಾಗಿರುವ ರಾಯಲ್ಟಿ ಬಂದ ಆದ ಮೇಲೆ ಮರಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದೇ ಒಂದು ವ್ಯಾಪಾರ ಮಾಡಿಕೊಂಡಿರುವ ದಲ್ಲಾಳಿಗಳು ಪಕ್ಕದ ವಿಜಯಪೂರ ಹಾಗೂ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ದೂರಿದರು.
ಇದರಲ್ಲಿ ಲೋಕಪಯೋಗಿ ಬಂದರು ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು, ತಾಲೂಕಾಡಳಿತ, ಪೊಲೀಸ್ ಇಲಾಖೆ ಕೂಡಾ ಶಾಮೂಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.
ಹಗಲಲ್ಲಿಯೇ ರಾಜಾರೋಷವಾಗಿ(ಪೋಲಿಸ ಇಲಾಖೆಯ ಸುಪರ್ದಿಯಲ್ಲಿ) ನೂರಾರು ದೊಡ್ಡ ಗಾತ್ರದ ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ.ಅಲ್ಲದೇ ಒಂದೇ ರಾಯಲ್ಟಿ ಮೊತ್ತವನ್ನು ಸರಕಾರಕ್ಕೆ ತುಂಬಿ ಹತ್ತಾರು ಲಾರಿಗಳನ್ನು ತುಂಬಿಕೊಂಡು ಬರುತ್ತಿದ್ದಾರೆ. ಕಾರಣ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅನಧಿಕೃತವಾಗಿ ಯಾವೂದೇ ಇಲಾಖೆಯ ಪೂರ್ವಾನುಮತಿ ಇಲ್ಲದೆ ಮರಳನ್ನು ದಾಸ್ತಾನು ಮಾಡಿರುವುದನ್ನು ಸರಕಾರ ವಶಪಡಿಸಿಕೊಂಡು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ನೀಡಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡರಾದ ಮರೆಪ್ಪ ಎಂ. ಕಟ್ಟಿಮನಿ, ಬಸವರಾಜ ಆರ್. ಮಾಳಳ್ಳಿಕರ್ ಸೇರಿದಂತೆ ಇತರರಿದ್ದರು.