ಸುರುಪುರ; ತಾಡಪಲ್ ವಿತರಣೆಗೆ ಅರ್ಜಿ ಆಹ್ವಾನ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ಹೋಬಳಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಕೃಷಿ ಸಂಸ್ಕರಣ ಘಟಕ ಯೋಜನೆಯಡಿಯಲ್ಲಿ ಸರ್ಕಾರದ ಸಹಾಯಧನದಲ್ಲಿ ತಾಡಪಲ್ ವಿತರಣೆಗಾಗಿ ಅರ್ಜಿ ಕರೆಯಲಾಗಿದೆ. ಅರ್ಹ ಫಲಾನುಭವಿಗಳು ಜು. ೨೯ರೊಳಗೆ ಆಧಾರ್‌ಕಾರ್ಡ್, ಪಹಣ , ಬ್ಯಾಂಕ್ ಪಾಸ್‌ಬುಕ್, ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಹಿಂದಿನ ಮೂರು ವರ್ಷದೊಳಗೆ ಸೌಲಭ್ಯ ಪಡೆದಿದ್ದರೂ ಪ್ರಸಕ್ತ ವರ್ಷದಲ್ಲಿ ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಕೃಷಿ ಅಧಿಕಾರಿ ವಿನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ