ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ:
ಜೆಸ್ಕಾಂ ಉಪ ವಿಭಾಗದಿಂದ ದೇವಾಪುರ ೧೧೦ ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದಿಂದ ಪ್ರತ್ಯೇಕ ಲೈನ್ ಸಂಪರ್ಕ ಕಲ್ಪಿಸಬೇಕು ಎಂದು ದೇವಾಪುರ ಗ್ರಾಮಸ್ಥರು ಗುರುವಾರ ಕಾರ್ಯ ನಿರ್ವಾಹಕ ರಾಜಶೇಖರ ಬಿಳಾರಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಚನ್ನಪ್ಪಗೌಡ ಜಕ್ಕನಗೌಡ, ಸುರಪುರ ಉಪ ವಿಭಾಗ ವಿದ್ಯುತ್ ವಿತರಣಾ ಕೇಂದ್ರದಿಂದ ದೇವಾಪುರದಲ್ಲಿರುವ ೧೧೦ ಕೆವಿ ಸ್ಟೇಷನ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದೇವಾಪುರ, ತಿಂಥಣ , ಅರಳಹಳ್ಳಿ, ಹುಣಸಿಹೊಳೆ, ಚನ್ನಪಟ್ಟಣ, ಬಂಡೊಳ್ಳಿ, ಎಸ್. ಲಿಂಗದಳ್ಳಿ ಶಾಂತಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಲೋಡ್‌ಶೆಡ್ಡಿಂಗ್ ಉಂಟಾಗಿ ಮೋಟಾರ್‌ಗಳು ಸುಟ್ಟು ಹೋಗುತ್ತವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದಾರೆ ಎಂದು ತಿಳಿಸಿದರು.
ಇದರಿಂದ ಗ್ರಾಮದಲ್ಲಿರುವ ಟಿ.ವಿ. ಪ್ರಿಡ್ಜ್, ಸೇರಿದಂತೆ ಇತರೆ ಎಲೆಕ್ಟಾçನಿಕ್ ವಸ್ತುಗಳು ಸುಟ್ಟು ಹೋಗುತ್ತಿವೆ. ಆದ್ದರಿಂದ ರೈತರ ಮತ್ತು ಗ್ರಾಮಸ್ಥರ ಹಿತ ಕಾಪಾಡಲು ಪ್ರತ್ಯೇಕ ಸಂಪರ್ಕ ಲೈನ್ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಇಇ ರಾಜಶೇಖರ ಬಿಳಾರ, ದೇವಾಪುರ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯವಿದ್ದರೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂತೋಷ ಬಾಕ್ಲಿ, ಮಹಾದೇವ ಚಲುವಾದಿ, ಗೋಪಾಲ ಕುಲಕರ್ಣಿ ಸೇರಿದಂತೆ ಇತರರಿದ್ದರು.
ಸುರಪುರ: ಜೆಸ್ಕಾಂ ಉಪ ವಿಭಾಗದಿಂದ ದೇವಾಪುರ ೧೧೦ ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದಿಂದ ಪ್ರತ್ಯೇಕ ಲೈನ್ ಸಂಪರ್ಕ ಕಲ್ಪಿಸಬೇಕು ಎಂದು ದೇವಾಪುರ ಗ್ರಾಮಸ್ಥರು ಗುರುವಾರ ಕಾರ್ಯ ನಿರ್ವಾಹಕ ರಾಜಶೇಖರ ಬಿಳಾರಿ ಅವರಿಗೆ ಮನವಿ ಮಾಡಿದರು.