ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ ಪರಿಶಿಷ್ಟ ಪಂಗಡದಲ್ಲಿ ಬರುವ ಗಿರಿಜನ ಮತ್ತು ಮೇದಾರ, ಅಲೆಮಾರಿ ಸಮುದಾಯದಲ್ಲಿ ಮೇದಾರ ಸಮುದಾಯವು ಒಂದಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿಗೆ ಸರ್ಕಾರವು ಅತಿಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ನ್ಯಾಯವಾದಿ ನಾಗರಾಜ್ ಚವಲ್ಕರ್ ಹೇಳಿದರು.
ನಗರದಲ್ಲಿ ನಡೆದ ಕೇತೇಶ್ವರ ಮೇದಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ಮೇದಾರ ಸಮುದಾಯ ಪ್ರಗತಿ ಹೊಂದಲು ಶಿಕ್ಷಣ ಬಹಳ ಮುಖ್ಯವಾಗಿದೆ. ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಬಿಜೆಪಿ ಸರ್ಕಾರವಿದ್ದಾಗ ಗಿರಿಜನ ಮತ್ತು ಮೇದಾರ, ಅಲೆಮಾರಿ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು. ನೂರು ಕೋಟಿಗಿಂತಲೂ ಹೆಚ್ಚು ಮೀಸಲಿಡಬೇಕು. ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಿ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಬೇಕು. ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಇದರತ್ತ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಪದಾಧಿಕಾರಿಗಳ ಆಯ್ಕೆ: ತಾಲೂಕು ಶ್ರೀ ಕೇತೇಶ್ವರ ಮೇದಾರ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ನಗರದ ಮೇದಾರಗಲ್ಲಿಯಲ್ಲಿ ಸಮಾಜದ ಹಿರಿಯ ಹಾಗೂ ಕಿರಿಯರ ಸಮ್ಮುಖದಲ್ಲಿ ಅವಿರೋಧವಾಗಿ ಜರುಗಿತು.
ಪ್ರಮುಖರಾದ ಶರಣುಗೌಡ ವೈ.ಪಾಟೀಲ್, ಭೀಮಣ್ಣ ಚಿನ್ನೂರು, ದೇವಪ್ಪ ಮಿಠಾಯಿ, ಪರಶುರಾಮ ಗುತ್ತೇದಾರ, ಗೋಪಾಲ ಚವಲಕರ್ ಆಲ್ದಾಳ, ಪರಶುರಾಮ ಟಿ.ಅಂಗಡಿ ಸೇರಿ ಸುಮಾರು ನೂರಕ್ಕೆ ಹೆಚ್ಚು ಜನ ಸಮಾಜದ ಹಿರಿಯ ಮತ್ತು ಕಿರಿಯರು ಇದ್ದರು.
ಇವರ ಸಮ್ಮುಖದಲ್ಲಿ ನರಸಪ್ಪ ಎಂ. ಚಾಮನಾಳ (ಗೌರವಾಧ್ಯಕ್ಷ), ರಾಘವೇಂದ್ರ ಎಂ.ಪೊಲೀಸ್ (ಅಧ್ಯಕ್ಷ), ಶಿವಪ್ಪ ಚವಲಕರ್ (ಉಪಾಧ್ಯಕ್ಷ), ಶ್ರೀನಿವಾಸ ಚಿನ್ನೂರು (ಪ್ರಧಾನ ಕಾರ್ಯದರ್ಶಿ), ವೆಂಕಟೇಶ ಕಳ್ಳಿಮನಿ (ಸಹ ಕಾರ್ಯದರ್ಶಿ), ನಾಗಪ್ಪ ಎನ್.ಚವಲಕರ್ (ಖಜಾಂಚಿ), ಸಂತೋಷ ಎಸ್.ಬಡಿಗೇರ್ (ಸಹ ಖಜಾಂಚಿ), ರಮೇಶ ಕಟ್ಟಿಮನಿ, ಪರಶುರಾಮ ಎಸ್.ಪಾಟೀಲ್, ಪ್ರಕಾಶ ಎಲ್.ಪ್ಯಾರಸೇಲರ್, ಪರಶುರಾಮ ಹಳಿಜೋಳ, ಭೀಮಣ್ಣ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಬಸವರಾಜ ಕೊಡೇಕಲ್, ಪರಶುರಾಮ ಪೊಲೀಸ್ (ಹಿರಿಯ ಸಲಹೆಗಾರರು). ಆಗಿ ಆಯ್ಕೆಯಾಗಿದ್ದಾರೆ.