ನ್ಯಾಯಬೆಲೆ ಅಂಗಡಿ ಮಾಲೀಕನಿಂದ ಪಡಿತರಿಗೆ ನಿಂದನೆ… ಆಕ್ರೋಶಗೊಂಡ ಹೆಗ್ಗಣದೊಡ್ಡಿ ಗ್ರಾಮಸ್ಥರಿಂದ ಮುತ್ತಿಗೆ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ಸರಕಾರದಿಂದ ಬಡವರಿಗೆ ನೀಡುವ ಪಡಿತರವನ್ನು ಪಡೆಯಲು ಹೋದ ಪಡಿತರ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮಾಲೀಕ ಸೋಮವಾರ ಅವಾಚ್ಯವಾಗಿ ನಿಂದಿಸಿರುವುದನ್ನು ಖಂಡಿಸಿ ಮಂಗಳವಾರ ಹೆಗ್ಗಣದೊಡ್ಡಿ ಗ್ರಾಮಸ್ಥರು ಗೋಡ್ರಿಯಾಳ ಅಂಗಡಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸೋಮವಾರ ಸಂಜೆ ಪಡಿತರವನ್ನು ಪಡೆಯಲು ಗೋಡ್ರಿಯಾಳದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಮಹಿಳೆಯರು ಹೋಗಿದ್ದಾರೆ. ಅಂಗಡಿ ಮಾಲೀಕನು ಸರದಿಯಲ್ಲಿ ನಿಲ್ಲುವಂತೆ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಥರ ನಿಂದಿಸುವುದು ತರವಲ್ಲ ಎಂಬುದಾಗಿ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆಗ ನ್ಯಾಯಬೆಲೆ ಅಂಗಡಿ ಮಾಲೀಕ ಮತ್ತು ಪುತ್ರ ಥಳಿಸಿದ್ದಾರೆ ಎಂದು ತಿಳಿಸಿದರು.
ಇದರಿಂದ ಕುಪಿತಗೊಂಡ ಹೆಗ್ಗಣದೊಡ್ಡಿ ಗ್ರಾಮಸ್ಥರು ಒಟ್ಟಾಗಿ ಬಂದು ಪ್ರತಿಭಟಿಸುತ್ತಿದ್ದೇವೆ. ವಾಲ್ಮೀಕಿ ಭವನದಲ್ಲಿ ಪಡಿತರ ಇಳಿಸಿ ನೀಡುತ್ತಿದ್ದಾರೆ. ಸರಕಾರದ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಆಹಾರ ಇಲಾಖೆ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರನ್ನು ತುಚ್ಛವಾಗಿ ಕಾಣುತ್ತಿದ್ದಾರೆ. ಹೆಗ್ಗಣದೊಡ್ಡಿ ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದಾರೆ. ಆದ್ದರಿಂದ ಹೆಗ್ಗಣದೊಡ್ಡಿ ಗ್ರಾಮಕ್ಕೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ಶೀಘ್ರದಲ್ಲೇ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಮಾಲಿಗೌಡ ಪೊಲೀಸ್ ಪಾಟೀಲ್, ಸಿದ್ದಣ್ಣ ಸಾಹುಕಾರ, ಬಸನಗೌಡ ಬಿರಾದಾರ, ಸಾಯಣಬಣ್ಣ ಗಗ್ರಿ, ಚನ್ನಬಸು ಕಟ್ಟಿಮನಿ, ಮಾಳಪ್ಪ ಪೂಜಾರಿ, ದೇವಣ್ಞನ ಚಾಕರಿ, ಪ್ರಕಾಶ ಮಡಿವಾಳ (ಕ.ರ.ವೇ.), ರಮೇಶ ಸೂಗುರ, ನಾಗರಾಜ ತಿಪ್ಪನಟ್ಟಿಗೆ, ಮಲ್ಲಣ್ಣ ಅರಿಕೇರಿ, ಬಸವರಾಜ ಬೇವಿನಗಿಡ, ಪರಶುರಾಮ ಕಟ್ಟಿಮನಿ, ಸಾಯಬಣ್ಣ ಹಳೆಬುಕ, ಶರಣ ಪೊ.ಪಾ., ಯನಮನೂರ ಭಜೆಂತ್ರಿ, ಲಕ್ಷö್ಮಣ ದೊರಿ, ಮೌನೇಶ ಇಳಕಲ್ಲ, ಭೀಮಣ್ಣ ಮುಂಡರಗಿ, ಯಮನೂರಪ್ಪ ಪೂಜಾರಿ, ಪ್ರಧಾನಪ್ಪ ಸೌಕಾರ, ಕಾಳಿಂಗಪ್ಪ ಗಂಗನಾಳ, ಹಣಮಂತ ಸರಗಾರ, ಹಣಮಂತ ಕೊಪ್ಪಳ, ಸಿದ್ದಯ್ಯ ಗುತ್ತೇದಾರ, ಶಾಂತಗೌಡ, ಪಂಚಾಕ್ಷರಿ ಹಿರೇಮಠ, ಕೃಷ್ಣ ಆಲ್ದಾಳ ಸೇರಿದಂತೆ ಇತರರಿದ್ದರು.
—–
ಸುರಪುರ: ತಾಲೂಕಿನ ಗೋಡ್ರಿಯಾಳ ನ್ಯಾಯಬೆಲೆ ಅಂಗಡಿ ಮಂದೆ ಮಂಗಳವಾರ ಹೆಗ್ಗಣದೊಡ್ಡಿ ಗ್ರಾಮಸ್ಥರು ಪ್ರತಿಭಟಿಸಿದರು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ