ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಹುತಾತ್ಮ ವೀರಯೋಧ ಕೆಂಗುರಿ ಶರಣಬಸವ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ತಿನ ಮುಂಖಡರಿಂದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್ ಪಿ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ ಶೀಲವಂತ, ನೆರೆ ರಾಷ್ಟ್ರ ಪಾಕಿಸ್ತಾನ ನಿರಂತರವಾಗಿ ಭಾರತದ ವಿರುದ್ಧ ಕಾಲುಕೆರೆದುಗೊಂಡು ಯುದ್ಧಕ್ಕೆ ಇಳಿಯುತ್ತಿದೆ. ಇದಕ್ಕೆ ಭಾರತೀಯ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ.. 1995ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಹಯದ ಪತಾಕೆ ಹಾರಿಸಿತು. ಈ ಯುದ್ಧದಲ್ಲಿ ಅಪಾರ ಸೈನಿಕರು ಪ್ರಾಣ ತೆತ್ತರೆ, ಹಲವಾರು ಸೈನಿಕರು ಗಾಯಗೊಂಡರು. ಇವರ ತ್ಯಾಗ ಅಜರಾಮರ ಎಂದರು.
ವಿಎಚ್ ಪಿ ಜಕಾರ್ಯಕರ್ತರಾದ ಸಚಿನ್ ಹಳೆಮನಿ, ರಮೇಶ ಅಡ್ಡೊಡಗಿ, ಶಿವರಾಜ್ ಅಡ್ಡೊಡಗಿ ಸೇರಿದಂತೆ ಇತರೆ ಕಾರ್ಯಕರ್ತರು ಇದ್ದರು.