ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ನಗರದ ಕಮಲ ಕಿಶೋರ ಗೋವರ್ಧನ್ ದಾಸ ಲಡ್ಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಖಜಾನಾಧಿಕಾರಿ ಪತ್ರಾಂಕಿತ ಉಪ ಖಜಾನೆ ಅಧಿಕಾರಿ ಸಣ್ಣಕ್ಕೆಪ್ಪ ಎಚ್. ಕೊಂಡಿಕಾರ, ಪ್ರಾಂಶುಪಾಲ, ಪ್ರೊ. ಆನಂದಕುಮಾರ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ. ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕೃತಿಕ ಘಟಕಗಳ ಸಂಚಾಲಕರಾದ ಪ್ರೊ. ಬಲಭೀಮ ದೇಸಾಯಿ,ಪ್ರೊ. ವಿಶ್ವನಾಥರೆಡ್ಡಿ, ಪ್ರೊ. ವೆಂಕೋಬ ಬಿರಾದಾರ, ಪ್ರೊ. ಗುರುರಾಜ ನಾಗಲಿಕರ, ಪ್ರೊ. ಹೆಚ್. ಎಂ. ವಗ್ಗರ, ಪ್ರೊ. ದೇವಿಂದ್ರ ಪಾಟೀಲ, ಪ್ರೊ. ಶಾಜಯಾ ಅಂಜುಮ್ ಶೇಟ್, ಪ್ರೊ. ಪ್ರಮೋದ ಕುಲಕರ್ಣಿ, ಪರಮಣ್ಣ ದಿವಾಣ, ಶರಣಗೌಡ ಪಾಟೀಲ ಸೇರಿದಂತೆ ಇತರರಿದ್ದರು.
ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಇದ್ದರು.