ಸಹಕಾರ ಸಂಘದ ಲಾಭ ಪಡೆಯಿರಿ: ಸಂತೋಷ ನಾಯಕ.. ವಾಗಣಗೇರಾದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ..

 

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ

ಸುರಪುರ: ತಾಲೂಕಿನ ವಾಗಣಗೇರಾದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾರ್ಯಕ್ರಮವನ್ನು ಶಾಸಕರ ಸಹೋದರ, ಕಾಂಗ್ರೆಸ್ ಯುವ ಮುಖಂಡ ರಾಜಾ ಸಂತೋಷ ನಾಯಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು, ಅವುಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿಯಿಂದ ಪ್ರಯತ್ನಿಸಬೇಕು.

ಸರ್ಕಾರಕ್ಕೆ ಸರಿಸಮನಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್, ಪಿಎಲ್‌ಡಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘಗಳು ರೈತರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿವೆ. ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರು ಪಾವತಿಸಬೇಕು ಎಂದರು.
ಕಲಬುರಗಿ ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಹುಣಸಗಿಯ ಬಾಪುಗೌಡ ಮಾತನಾಡಿ, ನೂತನ ಸಂಘಕ್ಕೆ ಬೇಕಾದ ಸೌಲಭ್ಯಗಳನ್ನು ಜಿಲ್ಲಾ ಡಿಸಿಸಿ ಬ್ಯಾಂಕಿನಿಂದ ಒದಗಿಸಲಾಗುವುದು. ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸಬೇಕು. ಇದರಿಂದ ಬೇರೆಯವರಿಗೆ ಹಣಕಾಸಿನ ನೆರವು ದೊರೆತು ಸಹಕಾರ ತತ್ವ ಸಾರ್ಥಕವಾಗುತ್ತದೆ ಎಂದರು.
ವಾಗಣಗೇರಾ ಗ್ರಾಪಂ ವ್ಯಾಪ್ತಿಯಲ್ಲಿ 7ಸಾವಿರಕ್ಕೂ ಅಧಿಕ ಜನರಿದ್ದಾರೆ. 300 ಸದಸ್ಯ ರಿಂದ ಸಾವಿರಾರು ವರೆಗೆ ತಲುಪಬೇಕು. ಸಹಕಾರ ಸಂಘದ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಮನವಿ ಮಾಡಿದರು.

ಪಿಕೆಪಿಎಸ್ ನೂತನ ಅಧ್ಯಕ್ಷ ವಕೀಲಪ್ಪಗೌಡ, ಉಪಾಧ್ಯಕ್ಷ ದೌಲ್ ಸಾಬ್ ಬೊಮ್ಮನಹಳ್ಳಿ ಕಾರ್ಯದರ್ಶಿ ಬಸನಗೌಡ ಬಿ ಪಾಟೀಲ್ ಸದಸ್ಯರಾಗಿ ಬೈಲಪ್ಪ ಗೌಡ, ಆಂಜನೇಯ ಪಾಟೀಲ್, ಶರಬಯ್ಯ ಸ್ವಾಮಿ, ಮಲ್ಕಪ್ಪ ಪೂಜಾರಿ, ಶ್ರೀನಿವಾಸ್ ಪಾಟೀಲ್, ನಿಂಗಪ್ಪ, ಸಿದ್ದಣ್ಣ ಸಾಹುಕಾರ, ಹಣಮಂತ, ನ್ಯಾನೇಗೌಡ, ಭೀಮಣ್ಣ ಸಿಂಧೆ, ಮೌನೇಶ್ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ