ಅಕ್ರಮ ರಸಗೊಬ್ಬರ ಅಂಗಡಿಗೆ ಪರವಾನಗಿ ನೀಡದಂತೆ ಆಗ್ರಹ, ರೈತ ಸಂಪರ್ಕ ಕೇಂದ್ರಕ್ಕೆ ಮನವಿ

ಕ್ರಾಂತಿವಾಣಿ ವಾರ್ತೆ

ಸುರಪುರ: ತಾಲೂಕಿನಕೆಂಭಾವಿ ಪುರಸಭೆ ವ್ಯಾಪ್ತಿಯ ಸುರಪುರ ಹುನಗುಂದ ರಾಜ್ಯ ಹೆದ್ದಾರಿಯಲ್ಲಿರುವ ಸರ್ವೆ ನಂ. 348 ರಲ್ಲಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆಗೊಳಿಸಿದೇ ಅಕ್ರಮವಾಗಿ ತಲೆಎತ್ತಿರುವ ರಸಗೊಬ್ಬರ ಕೀಟನಾಶಕ ಅಂಗಡಿ ಮಾಲೀಕರಿಗೆ ರೈತ ಸಂಪರ್ಕದಿಂದ ಯಾವುದೇ ಪರವಾನಗಿ ನೀಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಹೆಚ್. ಆರ್. ಬಡಿಗೇರ ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿರುವ ಅವರು, ಸರ್ವೆ ನಂ. 348 ರಲ್ಲಿ ಪುರಸಭೆ ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ರಸಗೊಬ್ಬರ ಅಂಗಡಿಯನ್ನು ನಡೆಸುವುದಕ್ಕೆ ಹೊರಟಿರುತ್ತಾರೆ. ಇದು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿರುತ್ತದೆ. ಆದ್ದರಿಂದ ಇಲಾಖೆಯ ವತಿಯಿಂದ ಈ ಅಂಗಡಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರ ಮಾರಾಟ ಮಾಡಲು ಅನುಮತಿ ನೀಡಬಾರದೆಂದು ಎಂದು ಮನವಿ ಮಾಡಿಕೊಂಡಿದ್ದಾರೆ.
ಒಂದು ವೇಳೆ ಪರವಾನಿಗೆ ನೀಡಿದರೆ ಮುಂದಿನ ಆಗು ಹೋಗುಗಳಿಗೆ ತಾವೇ ಹೊಣೆಗಾರರೆಂದು ಎಚ್ಚರಿಕೆ ನೀಡಿದ್ದಾರೆ.

ರೈತ ಸಂಘದ ಹೋಬಳಿ ಗೌರವಾಧ್ಯಕ್ಷರಾದ ಯಮನಪ್ಪ ಕುಂಬಾರ, ಭೀಮನಗೌಡ ಗೌಡಗೇರಿ, ಮಲ್ಲನಗೌಡ ಪಾಟೀಲ ಗೌಡಗೇರಿ ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ