ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ತಾಲೂಕಿನ ದೇವರಗೋನಾಲದ
ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ, ಸುಕ್ಷೇತ್ರದಲ್ಲಿ ಅಮಾವಾಸ್ಯೆಯಂದು ಜಗದ್ಗುರು ಶ್ರೀ ಮೌನೇಶ್ವರ ಸಂಗೀತ ಸೇವಾ ಬಳಗದಿಂದ ಅಹೋರಾತ್ರಿ ಸಂಗೀತ ಸೇವೆ ನಡೆಯಿತು.
ಈ ಸಂ ಈ ಸಂದರ್ಭದಲ್ಲಿ ಕಲಾವಿದ ಶರಣಪ್ಪ ಕಮ್ಮಾರ್ ಮಾತನಾಡಿ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿರುವ ಸಂಗೀತಗಾರರ ಸ್ವವಿವರ ಒಳಗೊಂಡಂತಹ ಪುಸ್ತಕವನ್ನು ಸಮರ್ಪಣೆ ಮಾಡಲಾಗಿದೆ . ಈಗಾಗಲೇ ರಾಜ್ಯಾದ್ಯಂತ ಇರುವಂತ ಗಣ್ಯರು ಮತ್ತು ಕಲಾವಿದರಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ ಎಂದರು.
ಸಂಗೀತ ಸೇವೆಯು ಮನುಷ್ಯನ ಹುಟ್ಟಿನಿಂದಲೇ ಬರುತ್ತದೆ. ಸಂಗೀತಕ್ಕೆ ಎಲ್ಲಾ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ದೇವರ ನಾಮಸ್ಮರಣೆಯ ಸುಧೆಗಳನ್ನು ಆಡುವುದರಿಂದ ಮನಸ್ಸು ಪ್ರಫಲ್ಲಗೊಳ್ಳುತ್ತದೆ. ಸಂಗೀತ ಆಲಿಸುವುದರಿಂದ ಸದೃಢ ಆರೋಗ್ಯ ದೊರೆಯುತ್ತಿದೆ. ಆದ್ದರಿಂದ ಸಂಗೀತ ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು
ಕಲಾವಿದ ಜಗದೀಶ ಮಾನು ಮಾತನಾಡಿ, ಪ್ರತಿ ತಿಂಗಳು ಅಮವಾಸ್ಯೆಯಂದು ನಡೆಯುವ ಅಹೋರಾತ್ರಿ ಸಂಗೀತ ಕಾರ್ಯಕ್ರಮವು ಹೆಸರಾಂತ ಸಂಗೀತ ಕಲಾವಿದರಿಂದ ನಿರಂತರ 12 ಮಾಸಿಕ ಸಂಗೀತ ಕಾರ್ಯಕ್ರಮಗಳನ್ನು ಪೂರೈಸಿದೆ. ಮಹಾಲಯ ಅಮವಾಸ್ಯೆಯ ಹದಿಮೂರನೆಯ ಸರಣಿ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಆದ್ದರಿಂದ ಸದ್ಭಕ್ತರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಗದ್ಗುರು ಶ್ರೀ ಮೌನೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಕೋರಿದರು.
ದಿವ್ಯ ಸಾನಿಧ್ಯವನ್ನು ಪ್ರಧಾನ ಅರ್ಚಕರಾದ ಪ. ಪೂ. ಶ್ರೀ ಲಿಂಗಯ್ಯ ಸ್ವಾಮಿಗಳು, ಪ್ರಧಾನ ಅರ್ಚಕರು ವಹಿಸಿದ್ದರು.
ಸಂಗೀತ ಕಲಾವಿದರು ಸಂಗೀತ ಸೇವೆಯಲ್ಲಿ ಪಾಲ್ಗೊಡಿದ್ದರು.