- ವರದಿ : ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಹುಣಸಗಿ ತಾಲೂಕಿನ ಬಪ್ಪರಗಿ ಮತ್ತು ಕೊಡೇಕಲ್ ಗ್ರಾಮಗಳ ದಲಿತರಿಗೆ ಹೋರಾಟ ನಡೆಸಿದರೂ ನ್ಯಾಯು ಸಿಗುತ್ತಿಲ್ಲ. ಇದರಿಂದ ಅ. ೮ರಂದು ಸುರಪುರ ಬಂದ್ ಮಾಡುತ್ತಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸಗಿ ತಾಲೂಕಿನಲ್ಲಿ ನಡೆದಿರುವ ದಲಿತರ ಮೇಲಿನ ದಬ್ಬಾಳಿಕೆಗೆ ನ್ಯಾಯ ದೊರೆತಿಲ್ಲ. ಸರಕಾರದಿಂದ ದೊರೆಯುವ ಸೌಲಭ್ಯಗಳು ಮರೆಯಾಗಿವೆ. ದಲಿತ ಅಪ್ರಾಪ್ತ ಯುವತಿ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿಲ್ಲ. ಸಂತ್ರಸ್ಥೆಯ ಕುಂಟುAಬದವರ ಮೇಲೆ ಹಲ್ಲೆಯ ದಾಳಿ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆರೋಪಿಗಳ ವಿರುದ್ಧ ಪೋಕ್ಸೊ ಮತ್ತು ಹಲ್ಲೆ ಕೇಸ್ ದಾಖಲಾಗಿದೆ. ಆದರೆ ಒತ್ತಡಕ್ಕೆ ಮಣ ದ ಪಲೀಸರು ಆರೋಪಿಗಳನ್ನು ಇದುವರೆಗೂ ಬಂಧಿಸದಿರುವುದು ಖಂಡನೀಯ ಎಂದು ದೂರಿದರು.
ಬಪ್ಪರಗಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ದಲಿತರಿಗೆ ಬಹಿಷ್ಕಾರ ಹಾಕಿರುವುದು ಸರಿ ಅಲ್ಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಬಪ್ಪರಗಿ ಗ್ರಾಮಕ್ಕೆ ಭೇಟಿ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಹಾಪುರ ತಾಲೂಕಿನ ಚನ್ನೂರು ಗ್ರಾಮದ ಬಾಬಾ ಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಘಟನೆ ಮತ್ತು ಕೋನಾಳ ಗ್ರಾಮದ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಎರಡು ದಿನಗಳಲ್ಲಿ ಈಡೇರಿಸಬೇಕು ನಿರ್ಲಕ್ಷö್ಯ ವಹಿಸಿದ್ದಲ್ಲಿ ಅ.೮ ರಂದು ಸುರಪುರ ಬಂದ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕದಸಂಸ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ, ಮುಖಂಡ ಮೂರ್ತೆಪ್ಪ ಬೊಮ್ಮನಳ್ಳಿ ಮಾತನಾಡಿ, ದಲಿತರು ಮೌನಕ್ಕೂ ಮಿತಿಯಿದೆ. ನ್ಯಾಯ ದೊರೆಯದಿದ್ದರೆ ಹೋರಾಟ ರಾಜ್ಯ ವ್ಯಾಪಿ ಮೊಳಗಲಿದೆ ಎಂದು ವಾಗ್ದಾಳಿ ನಡೆಸಿದರು.
ದಲಿತ ಮುಖಂಡರಾದ ರಾಮು ಶೆಳ್ಳಗಿ, ನಾಗರಾಜ ಓಕುಳಿ, ದೇವಿಂದ್ರ ಬಾದ್ಯಾಪುರ, ಹುಲಗಪ್ಪ ಬೈಲಕುಂಟಿ, ದೇವು ಹೊರಟ್ಟಿ, ರಮೇಶ ಪೂಜಾರಿ, ಮಾನಯ್ಯ ಶೆಳ್ಳಗಿ, ರಾಯಪ್ಪ ಕೋರೆ, ವೀರಭದ್ರ ದೊಡ್ಡಮನಿ ತಳವಾರಗೇರಾ, ಖಾಜಾ ಹುಸೇನ್ ಗುಡುಗುಂಟಿ, ಮಲ್ಲಿಕಾರ್ಜುನ ವಾಗಣಗೇರಾ ಸೇರಿದಂತೆ ಇತರರಿದ್ದರು.
ಸುಪರುರ: ನಗರದ ಪತ್ರಿಕಾ ಭವನದಲ್ಲಿ ದಸಂಸಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.