ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ
ಸುರಪುರ: ಸಮಾಜದ ಅಭಿವೃದ್ಧಿಯಲ್ಲಿ ಸರಕಾರಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿ ನಿವೃತ್ತರಾಗಿರುವವರ ಅದ್ಭುತ ಸಂಪನ್ಮೂಲ ಬಳಸಿಕೊಡರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ್ ಹೇಳಿದರು.
ನಗರದ ಭೋವಿಗಲ್ಲಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ತಾಲೂಕಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸರಕಾರಿ ನಿವೃತ್ತ ನೌಕರರ ೧೭ನೇ ಸಮಾವೇಶ ಮತ್ತು ನಿವೃತ್ತ ಹಿರಿಯ ಸದಸ್ಯರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
೬೦ ವರ್ಷದ ಹಿರಿಯ ಪಟ್ಟಿಗೆ ಸೇರುವ ನಿವೃತ್ತರನ್ನು ಜೋಪಾನದಿಂದ ಕಾಪಾಡಿಕೊಳ್ಳಬೇಕು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶೀಘ್ರದಲ್ಲೇ ಶಾಸಕ ರಾಜಾ ವೇಣುಗೋಪಾಲ ನಾಯಕ
ಅವರು ನೀಡಿರುವ ಅನುದಾನದಿಂದ ನಿವೃತ್ತ ನೌಕರರ ಭವನ ನಿರ್ಮಾಣವಾಗಲಿದೆ ಎಂದರು.
ವಿವಿಧ ನಿವೃತ್ತ ಮುಖಂಡರು ಮಾತನಾಡಿ, ೩೦ ವರ್ಷಕ್ಕೂ ಹೆಚ್ಚು ಕಾಲ ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತೇವೆ. ಅನೇಕ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಸರಕಾರ ಇದರತ್ತ ಗಮನಹರಿಸಿ ಪ್ರತ್ಯೇಕ ಆರೋಗ್ಯ ವಿಮೆ ನೀಡಬೇಕು. ಬ್ಯಾಂಕ್, ಸರಕಾರಿ ಮತ್ತು ಖಾಸಗಿ ಆಸ್ಪತ್ರೆ, ಬ್ಯಾಂಕ್ ಸೇರಿದಂತೆ ವಿವಿಧೆಡೆ ವಿಶೇಷ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ಸನ್ಮಾನ: ಜೇಷ್ಠತ ಆಧಾರದ ಮೇಲೆ ನಿವೃತ್ತರಾದ ಸಿದ್ದಲಿಂಗಯ್ಯ ಪಂಪಯ್ಯ ಹಿರೇಮಠ, ಡಾ. ಸತ್ಯನಾರಾಯಣ ಆಲದರ್ತಿ, ರಾಮತೀರ್ಥ, ಸಂಪತ್ತಕುಮಾರಿ, ಸತ್ಯನಾರಾಯಣ ವೀರಯ್ಯ ಕೋಸ್ಟಿ, ಸೈಯದ್ ಬಂದೇ ಅಲಿ, ರಾಮಚಂದ್ರ ಟೊಣಪೆ, ಮಧುಸೂಧನಾಚಾರ್ಯ ಪುರಾಣ ಕ, ರಾಜಣ್ಣ ಕಡಕೋಳ, ಬಿ.ಆರ್. ಜಾಗೀರದಾರ, ಚಿನ್ನ ಶಂಕ್ರಪ್ಪ ಚಂದಪ್ಪ ಕೊಂಕಲ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.
ನಿವೃತ್ತ ನೌಕರ ಸಂಘದ ಅಧ್ಯಕ್ಷ ಶಿವಪ್ಪ ಬಿ. ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಪ್ರಭುದೇವ ಜಿ. ಕಲ್ಲೂರಮಠ, ಹನುಮಪ್ಪ ಪೂಜಾರಿ, ರಾಜಾ ಅಮರಪ್ಪರಾಜ, ಅಬ್ದುಲ ರಜಾಕಸಾಬ ನಾಲತವಾಡ, ಬಸಪ್ಪ ಬಿ. ಸಾಲೇಗಾರ, ಭೀಮಭಟ್ಟ ಜೋಶಿ, ಸಂಗಮ್ಮ ಕೊಡೇಕಲ್, ವಾಸುದೇವ ಗಂಗೆ, ಶಶಿಕಲಾ ಎಸ್. ಕಟ್ಟಿಮನಿ, ಜಗದೀಶ ಮಾನು, ಸುವರ್ಣ ಎಂ. ಅರ್ಜುಣ ಗಿ, ಲಕ್ಷಿ ್ಮÃಕಾಂತ, ಡಿ.ಎಂ. ನಾಯಕ, ಬಸಣ್ಣನಾಯಕ ತಿಂಥಣ , ಪಿ. ಶಾಮಸುಂದರ, ರಾಧೇಶಾಮ ಗುಡಗುಂಟಿ, ಕೊಟ್ರಯ್ಯಸ್ವಾಮಿ, ಪಿಡ್ಡನಾಯಕ ರಾಜಾ ವೆಂಕಪ್ಪನಾಯಕ, ಮಹ್ಮದ್ ಜಲಾಲ, ಮಹಾದೇವಪ್ಪ ಚಾಮನಾಳ, ಆದಪ್ಪ ಲಕ್ಷ್ಮಣ, ಮಲ್ಲಿಕಾರ್ಜುನ ಜಮದ್ರಖಾನಿ, ಮಲ್ಲಯ್ಯ ಭಂಡಾರಿ, ಶಂಕರಪ್ಪ ಬಣಗಾರ, ಹೊಳೆಪ್ಪ ಕನಗಾರ, ಹೊಳೆಪ್ಪಾಂದ್ರಗಿ, ಶರಣಪ್ಪ ಯಾಳಗಿ ಕೆಂಭಾವಿ, ಹಣಮಂತ್ರಾವ ಕುಲಕಣ ð, ಅಮರೇಶಬಾಬು ಚಿನ್ನಾಕಾರ, ಆದಪ್ಪಗೌಡ ಬಿರಾದಾರ, ದೇವಿಂದ್ರಪ್ಪ ಬಳಿಚಕ್ರ, ಬಾಲರಾಜ ಹಸನಾಪುರ, ರಾಮಕೋಟೆಪ್ಪ ಯಳಮೇಲಿ, ನಾರಾಯಣರಾವ ಜುಜಾರೆ, ನಂದನರೆಡ್ಡಿ, ವಿಜಯಕುಮಾರ ದೀವಳಗುಡ್ಡ, ಅಬ್ದುಲ್‌ಖಾಸಿಂ ಕಬಾಡಗೇರ, ಶಾಂತಣ್ಣ ನಾಯಕ, ಶ್ರೀನಿವಾಸ ಜಾಲವಾದಿ, ಯಲ್ಲಪ್ಪ ದರಬಾರಿ, ಭೀಮಣ್ಣ ಹುದ್ದಾರ ಆಲ್ದಾಳ, ರಾಮಚಂದ್ರಭಟ್ಟ, ಸಿದ್ದಯ್ಯ ಪುರಾಣ ಕಮಠ ಸೇರಿದಂತೆ ಇತರರಿದ್ದರು.
ಸುರಪುರ: ನಗರದ ಭೋವಿಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರಕಾರಿ ನಿವೃತ್ತ ನೌಕರರ ೧೭ನೇ ಸಮಾವೇಶ ಮತ್ತು ನಿವೃತ್ತ ಹಿರಿಯ ಸದಸ್ಯರ ಸನ್ಮಾನ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಲಾಯಿತು.