ತೋಟಗಾರಿಕೆ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಅಮಾನತಿಗೆ ಆಗ್ರಹ ..ದಸಂಸ ತಾಲೂಕು ಸಮಿತಿ ಸದಸ್ಯರಿಂದ ಪ್ರತಿಭಟನೆ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ
ಸುರಪುರ: ನರೇಗಾ ಯೋಜನೆಯಡಿ ಯಾವುದೇ ಕ್ರಿಯಾ ಯೋಜನೆ ಇಲ್ಲದೇ ಫಲಾನುಭವಿಗಳಿಂದ ಲಂಚ ಪಡೆದುಕೊಂಡು ಕಾಮಗಾರಿ ಎಂಟ್ರಿ ಮಾಡುತ್ತಿರುವ ತೋಟಗಾರಿಕೆ ತಾಂತ್ರಿಕ ಸಹಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆಯಿಂದ ಪ್ರತಿಭಟಿಸಿ ಸಹಾಯಕ ಹಿರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕರಾದ ಮಲ್ಲಿಕಾರ್ಜುನ ಹಣ ನೀಡಿದವರಿಗೆ ಮಾತ್ರ ಖೊಟ್ಟಿ ಬಿಲ್ ಸೃಷ್ಠಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಸಾಲಿನ ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಡಿ ಯಾವುದೇ ಕ್ರಿಯಾ ಯೋಜನೆ ಇಲ್ಲದೇ ಫಲಾನುಭವಿಗಳಿಂದ ಲಂಚ ಪಡೆದುಕೊಂಡು ಕಾಮಗಾರಿ ಎಂಟ್ರಿ ಮಾಡಿ ಎನ್.ಎಂ.ಆರ್. ತೆಗೆದು ಪೇಮೆಂಟ್ ಮಾಡುತ್ತಾರೆ. ಲಂಚ ಕೊಡದ ಫಲಾನುಭವಿಗಲಿಗೆ ಮೋಸ, ವಂಚನೆ ಮಾಡಿ ಎನ್.ಎಂ.ಆರ್. ಶೂನ್ಯ ಮಾಡುತ್ತಾರೆ. ಈ ಬಗ್ಗೆ ವಿಚಾರಿಸಿದರೆ ಆದೇಶವಿದೆ ಕ್ರಿಯಾ ಯೋಜನೆ ಪಟ್ಟಿಯಲ್ಲಿ ಇರದಿದ್ದರೆ ಎನ್.ಎಂ.ಆರ್. ತೆಗೆಯಬಾರದು ಎಂದು ಸಬೂಬು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಯ ತಾರತಮ್ಯ ನೀತಿಯಿಂದಾಗಿ ಕೂಲಿ- ಕಾರ್ಮಿಕರ ಮಾನವ ದಿನಗಳ ಸಂಖ್ಯೆ ಹಾಳಾಗುತ್ತಿವೆ. ಬಡ ಕೂಲಿ ಕಾರ್ಮಿಕರು ಹಾಗೂ ರೈತರಿಗೆ ತುಂಬಾ ಮಾರಕವಾಗುತ್ತಿದೆ. ಈ ಬಗ್ಗೆ ಜಾಲಿಬೆಂಚಿ ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿದರೂ ಸಹಾಯಕ ತೋಟಗಾರಿಕೆ ನಿರ್ದೇಶಕರು ನಿರ್ಲಕ್ಷö್ಯವಹಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣ ಸಿ ಕ್ರಮ ಕೈಗೊಳ್ಳದಿದ್ದರೆ
ಮುಂದಿನ ದಿನಮಾನಗಳಲ್ಲಿ ಜಾಲಿಬೆಂಚಿ ಗ್ರಾಮಸ್ಥರೊಂದಿಗೆ ತೋಟಗಾರಿಕೆ ಕಚೇರಿಗೆ ಬೀಗ ಮುದ್ರೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಎಂ. ಪಟೇಲ, ಚನ್ನಬಸಪ್ಪ ತಳವಾರ, ಶೇಖರ ಮಂಗಳೂರು, ರಾಜು ಬಡಿಗೇರಾ, ವೆಂಕಟೇಶ ದೇವಾಪುರ, ದೇವೇಂದ್ರ ಬಡಿಗೇರ, ರಮೇಶ ಬಡಿಗೇರ, ಹಣಮಂತ ರತ್ತಾಳ, ಹಣಮಂತ ದೇವಾಪುರ ಸೇರಿದಂತೆ ಇತರರಿದ್ದರು.
ಸುರಪುರ: ನರೇಗಾದಲ್ಲಿ ಅಕ್ರಮ ಎಸಗುತ್ತಿರುವ ತಾಂತ್ರಿಕ ಸಹಾಯಕನನ್ನು ಅಮಾನತಿಗೆ ಒತ್ತಾಯಿಸಿ ದಸಂಸ ತಾಲೂಕು ಸದಸ್ಯರು ತೋಟಗಾರಿಕೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ